Veenithanaagi Beduve Naada (ವಿನೀತನಾಗಿ ಬೇಡುವೆ ನಾದಾ)

ವಿನೀತನಾಗಿ ಬೇಡುವೆ ನಾದಾ ಪುನೀತ ಗೊಳಿಸು ಓ ಅಲ್ಲಾಹ್
ನಿಶ್ಚಿತವಾಗಿಯೂ ನಿನ್ನನು ಹೊರತು ಆರಾದ್ಯನರ್ಹ ಯಾರಿಲ್ಲ


ಶತನಾಮಗಳ ಒಡೆಯನು ನೀನು ನಿನ್ನಯ ಸೃಷ್ಟಿಯ ಕಾಪಾಡು
ನೀನೇ ನಿತ್ಯ ನೀನೇ ಸತ್ಯ ದಾಸನ  ಕೂಗನು ನೀ ಕೇಳು
ಪಾಪಗಳೊಂದಿಗೆ ನಿನ್ನಯ ಬಳಿಗೆ ಮರಳುವ ವೇಳೆ ಕಾಪಾಡು  ||2||


ಪ್ರತಿಫಲ ದಿನದ ಒಡೆಯನು ನೀನು ಪ್ರಪಂಜ ಸಲಹುವೆ ಓ ಅಲ್ಲಾಹ್
ವಿನಮ್ರವಾಗಿ ಶಿರವನು ಬಾಗುವೆ ವಿಧೇಯನಾಗಿ  ಓ ಜಲ್ಲಾ


ಮಹಾ ವಿಪತ್ತು ತಲುಪುವ ಹೊತ್ತು ಮಹಾ ಪ್ರಭುವೇ ಕಾಪಾಡು
ಮಣ್ಣು ಈ ಮಣ್ಣಿಗೆ ಸೇರುವ ಮುನ್ನ ಮನುಷ್ಯನಾಗಿಸು ಓ ಅಲ್ಲಾಹ್

Post a Comment

0 Comments