Keliri Nanna (ಕೇಳಿರಿ ನನ್ನ ಪ್ರೀತಿಯ ಜನರೇ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಕೇಳಿರಿ ನನ್ನ ಪ್ರೀತಿಯ ಜನರೇ
ನೋಡಿರಿ ಒಮ್ಮೆ ಇತ್ತ ಕಡೆಗೆ
ಇಸ್ಲಾಂ ಧರ್ಮವ  ಕಲಿಸಲು ಬಂದರು
ಪ್ರವಾದಿವರ್ಯರು ನಮ್ಮ ಕಡೆಗೆ (2)

ತಂದೆಯು ಇಲ್ಲ  ತಾಯಿಯು ಇಲ್ಲ
ತಬ್ಬಲಿಯಾಗಿ ಬೆಳೆದ ನೆಬಿಯೂ (2)
ತನ್ನನು ನೆನೆಯದೆ ತಮ್ಮವರನ್ನು
ತನ್ನವರಾಗಿ ಕಂಡ ನೆಬಿಯೂ

(ಕೇಳಿರಿ)

ಕಷ್ಟವ ಸಹಿಸಿ ಬೆವರನು ಸುರಿಸಿ
ದಿನನೂ ಉಳಿಸಿ  ಗೆದ್ದ ಪ್ರವಾದಿ (2)
ಪೆಟ್ಟನು ತಿಂದು ಉಮ್ಮತಿಗಾಗಿ
ಕಸ್ಟದ ಬಲೆಯಲಿ ಬಿದ್ದ ಪ್ರವಾದಿ (2)

(ಕೇಳಿರಿ)

ಮಕ್ಕ ನಗರದಿ ಜನಿಸಿದ ನೆಬಿಯು
ಮದೀನ ಕಡೆ ಪಯಣಾ ಹಾಕಿದರು (೨)
ದೀನಿಗೆ ಅಂತಿಮ ವಿರಾಮ ಹಾಕಿ
ರಬ್ಬಿನ ಕರೆಗೆ ಓ ನೀಡಿದರು (೨)

(ಕೇಳಿರಿ)

Post a Comment

0 Comments