ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ತಿರು ತ್ವಾಹ ಮಲಗಿದ ಪುಣ್ಯ ನಾಡದು
ಅಂದು ಮದೀನ ಪರಿಸರ ತಲ್ಲಣಗೊಂಡಿತೂ,
ತ್ವಾಹ ದೇಹ ಮಣ್ಣಿಗಂದು ಸ್ಪರ್ಶನೆಯಂದು
ಇಡಿ ಪ್ರಪಂಚವೆ ಕಣ್ಣೀರಲ್ಲಿ ಮುಳುಗಿತಂದು(2)
ರೌಳಾ ಕಾಣಲು ಆಸೆ ಗೂಡಿಸು ಅಲ್ಲಾಹ್
ರೌಳಾವನ್ನು ಚುಂಬಿಸಲು ಭಾಗ್ಯ ನೀಡಲ್ಲಾಹ್(2)
(ತಿರು ತ್ವಾಹ ಮಲಗಿದ )
ಆಮೀನ ಅಬ್ದುಲ್ಲಾರ ಕರುಳಕುಡಿ
ಮೆಕ್ಕಾ ನಾಡಲ್ಲಿ ಬೆಳಗಿ ಬಂದ ನೆಬಿ(2)
ಮಕ್ಕಾದಲ್ಲಿ ಅನಚರ ತಲೆದೂಗಿತ್ತು
ತಿರುನೆಬಿಯರ ಸ್ಪರ್ಶನಕ್ಕೆ ಮಾಯವಾಯಿತು(2).
( ತಿರು ತ್ವಾಹ ಮಲಗಿದ )
ಶ್ರೇಷ್ಟ ನೆಬಿಯರ ಮಧ್ಹ್ ಹಾಡುತಲಿ
ಮಧುರ ಗೀತೆಯನು ಹಾಡಿ ಹೊಗಳುತಲಿ (2)
ತಿರು ತ್ವಾಹ ಮುತ್ತು ರಸೂಲುಲ್ಲಾಹ್
ಅಂತ್ಯದಿನದಲ್ಲಿ ಶಫಾಅತ್ ನೀಡು ಜಲ್ಲಾ(2)
(ತಿರು ತ್ವಾಹ ಮಲಗಿದ )
ರೌಳಾ ಕಾಣಲು ಆಸೆ ಪೂರೈಸು ಅಲ್ಲಾಹ್
ರೌಳಾವನ್ನು ಚುಂಬಿಸಲು ಭಾಗ್ಯ ನೀಡು ಅಲ್ಲಾಹ್(2)
ತಿರು ತ್ವಾಹ ಮಲಗಿದ ಪುಣ್ಯ ನಾಡದು....
೨೦೦ಕ್ಕೂ ಹೆಚ್ಚು ಮಧ್ಹ್ ಹಾಡುಗಳ ಆಡಿಯೋ ಪ್ಲೇಯರ್ ಆಪ್ .."ಇಶಲ್ ಟ್ಯೂನ್ಸ್"
0 Comments