Arabi Akshara (ಅರಬಿ ಅಕ್ಷರ ಅಲಿಫ್ ಸೆ ಶುರು)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಅರಬಿ ಅಕ್ಷರ ಅಲಿಫ್ ಸೆ ಶುರು
ಕಲಿಸಿಕೊಟ್ಟರು ನನ್ನಯ ಗುರು
ಅದರ ನಂತರ ಅಕ್ಷರವು ಬಾ
ಕಲಿಯಲು ಬಾ ಮದರಸಕ್ಕೆ ಬಾ

ತಾ ಸಾ ಜಿಮ್ ಕೇಳು ನಂತರ
ಹಾ ಖಾ ದಾಲ್ ಹೇಳು ದಾಲ್ ರಾ
ಬಾಯಿ ತೆರೆಯಿರಿ ಜ಼ಾ ನುಡಿಯಿರಿ
ಹಲ್ಲು ಕಚ್ಚಿರಿ ಸೀನ್ ಹೇಳಿರಿ

ಶೀನ್ ಗೆ ಮೂರು ಚುಕ್ಕೆ ಹಾಕಿರಿ
ಕಲಿಯಲು ಜೋರು ಸ್ವರವ ಎತ್ತಿರಿ

ಸ್ವಾದ್  ಲ್ವಾದಿದು ಜೋಡಿ ಅಕ್ಷರ
ತ್ವಾ ಲ್ವಾಯಿಗೂ ಇದುವೇ ಉತ್ತರ

ಗಂಟಲಿಂದಲೇ ಐನ್ ಬರುವುದು
ಚುಕ್ಕೆ ಕೊಟ್ಟರೆ ಗೈನ್   ಸಿಗುವುದು
ಫಾಅ   ಖಾಫೀದೇ  ಕಾಫ್ ಗೆ ಮೊದಲು
ಪಾಠ  ಕೇಳಿರಿ ಆಟದ ಬದಲು

ಲಾಂ ಬರೆಯಿರಿ ಸುಲಭದಿಂದಲೇ
ಮೀಮ್  ತಿಳಿಯಿರಿ ವೇಗದಿಂದಲೇ

ನಾನು ಅನ್ನುವ ನೂನ್ ಎನ್ನುವ
ಬಳಿಕ ಬರೆಯುವ ಅಕ್ಷರವೇ ವಾ

ಹಾ ಕಲಿತೆಯಾ ನನ್ನಯ ಗೆಳೆಯ
ಒಂದಿದೆ ಕೊನೆಯ ಅಕ್ಷರವು ಯಾ

ಇವುಗಳೆಲ್ಲವೂ ಅರಬಿ  ಅಕ್ಷರ
ಪುಟ್ಟ ಮಕ್ಕಳೇ ಇರಲಿ ಎಚ್ಚರ



Post a Comment

0 Comments