Hrudayaaladi Punya Madeena (ಹೃದಯಾಳದಿ ಪುಣ್ಯ ಮದೀನಾ)

ಸಾಹಿತ್ಯ : ಮುನವ್ವರ್ ಜೋಗಿಬೆಟ್ಟು 
ಗಾಯಕ : ಖಾದರ್ ಸುರತ್ಕಲ್

ಹೃದಯಾಳದಿ ಪುಣ್ಯ ಮದೀನಾ
ಹೆಸರಿಡುವೆ ನಂದನ ವನ
ಆತಿಥ್ಯ ಸ್ವೀಕರಿಸುವ ದಿನ
ತಿಳಿಯದೆ  ಚಡಿಪಡಿಸುವನೇ..
ಆಸೆಯ ಉತ್ಕಟ ಪರಿಯ
ಅರಿಯದೆ ಪರಿ ಪಾಲಕನೇ (೨)

ಪ್ರೀತಿ ಸೂಸುವ ಹೃದಯದಲೀಗ
ತೈಬ ಮಣ್ಣಿನ ಸ್ವಾದಾ
ಸ್ನೇಹ ಹರಿಯುವ ನದಿಯಲ್ಲೀಗ
ಇಶ್ಕಿನ ಹನಿಗಳ ಜೋಗ

ಸ್ವಲ್ಲಿ ಅಲಾ ನೆಬಿ ಹಬೀಬಿ
ಯಾ ರಸೂಲುಲ್ಲಾಹ್(೨)    (ಹೃದಯಾಳದಿ)

ಚಂದ್ರನೇ ಸೋಲುವ ವದನವದು
ಪ್ರೇಮಿಯ ಹಾಡಿನ ಚರಣವಿದು (೨)
ಇಶ್ಕಿನ ಖೈದಿಯ ಪಂಜರದಲ್ಲಿ ಸೂರ್ಯೋದಯ(೨)
ಪ್ರೇಮದ ಗುರುತಿನ ಹಾದಿಗಳೆಲ್ಲಾ
ತ್ವೈಬಾ ಮಯ

ಕಣ್ಣ ಹನಿಯ ಬಿಂದುಗಳಿಂದು
ಹೇಳಿದೆ ವಿರಹದ ಯಾತ್ರೆ
ನೋವಿನ ಪಲ್ಲವಿ ಹಾಡಿದ ಕವಿಗೆ
ಪ್ರತಿಫಲ ಇಶ್ಕಿನ ಜಾತ್ರೆ...

ತ್ವಾಹ ಮುಹಮ್ಮದ್ ಯಾ ರಸೂಲಲ್ಲಾಹ್
ತಾಜಾ ಮುಝಮ್ಮಿಲ್ ಯಾ ಹಬೀಬಲ್ಲಾಹ್
(....)

ಸ್ವಲಾವತಿ ಅಲಾನ್ನಬೀ ಹಬೀಬಿ
ಸ್ನೇಹ ಆಭುದಿ ಪುಣ್ಯ ನಿಧಿ(೨)
ಸದ್ಗುಣ ಸಂಪನ್ನರೇ  ಹಬೀಬ್(೨)
ಗಗನ ಕುಸುಮದ ಪ್ರಣಯೋನ್ಮತಿ

ಕಣ್ಣ ಹನಿಯ ಬಿಂದುಗಳಿಂದು
ಹೇಳಿದೆ ವಿರಹದ ಯಾತ್ರೆ
ನೋವಿನ ಪಲ್ಲವಿ ಹಾಡಿದ ಕವಿಗೆ
ಪ್ರತಿಫಲ ಇಶ್ಕಿನ ಜಾತ್ರೆ...

ತ್ವಾಹ ಮುಹಮ್ಮದ್ ಯಾ ರಸೂಲಲ್ಲಾಹ್
ತಾಜಾ ಮುಝಮ್ಮಿಲ್ ಯಾ ಹಬೀಬಲ್ಲಾಹ್

ಪ್ರೀತಿ ಸೂಸುವ ಹೃದಯದಲೀಗ
ತೈಬ ಮಣ್ಣಿನ ಸ್ವಾದಾ
ಸ್ನೇಹ ಹರಿಯುವ ನದಿಯಲ್ಲೀಗ
ಇಶ್ಕಿನ ಹನಿಗಳ ಜೋಗ.

ಸ್ವಲ್ಲಿ ಅಲಾ ನೆಬಿ ಹಬೀಬಿ
ಯಾ ರಸೂಲುಲ್ಲಾಹ್(೨) (.....)




Post a Comment

0 Comments