Maanava Kelu Punya (ಮಾನವ ಕೇಳು ಪುಣ್ಯ ನಬಿಯ)


ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಮಾನವ ಕೇಳು ಪುಣ್ಯ ನಬಿಯ ವಚನವಾ..
ಮಾಡಿದ ಪಾಪಗಳಿಗೆ ಬೇಡು ಮೋಕ್ಷವಾ..
ಮಾಲಿಕ ನಾದ ಲೋಕ ನಾಯಕ ಅವಾ..
ಮಾಡು ನೀ ಕೈ ಗಳೆತ್ತಿ ನಿತ್ಯವೂ ದುವಾ..(ಮಾನವ)

ತಂದೆ-ತಾಯಂದಿರೆದುರು ತಾಳ್ಮೆಯಿಂದ ಜೀವಿಸು..
ತನ್ನ ಪಾಡನ್ನು ತೊಲೆದು ಅವರ ಮಾತು ಪಾಲಿಸು..(2)

ತಪ್ಪು ಮಾತನ್ನು ನುಡಿಯೋ ಮುಂಚೆ ನೀನು ಯೋಚಿಸು..
ತಕ್ಕ ಪಾಠಕ್ಕೆ ಸಿಲುಕಲಿರುವೆ ನೀ ನಿರೀಕ್ಷಿಸು..(2)

ನಿನ್ನ ದಾಹ ಶಮನಕೆಂದು ಎದ್ದು ಕುಳಿತ ತಾಯಿಯಾ..
ನಿದ್ದೆ ಕಡೆಗೆ ಗಮನ ಕೊಡದ ರಾತ್ರಿ ನೀನು ಮರೆತೆಯಾ..
ನಿರ್ಮಲ ಮನಸ್ಸಿನಿಂದ ನಿನಗೆ ಕೊಟ್ಟ ಪ್ರೀತಿಯಾ..
ನಿತ್ಯ ನಿನ್ನ ಬದುಕಿನಲ್ಲಿ ತೋರಿಸು ಓ ಗೆಳೆಯಾ..

ನಿಂದ್ಯವಾದ ಬಾಳು ಬಿಡುವೆಯಾ.. (ಮಾನವ)

ಅಂತ್ಯದ ದಿನದ ಕಥೆಯ ಕೇಳು ನಾನು ಹೇಳುವೆ..
ಅಂತಿಮ ಸೋಲಾದರೆ ನೀ ನರಕದಲ್ಲಿ ಬೀಳುವೆ..(2)

ಅಗ್ನಿಯ ಅತಿ ಬಿಸಿ ಅದೇಗೆ ನೀನು ಸಹಿಸುವೆ..?
ಅಂದಿನ ಸ್ಥಿತಿ ಗತಿ ಯಾರೊಂದಿಗೆ ನೀ ತಿಳಿಸುವೆ..?(2)

ಜನ್ಮ ಕೊಟ್ಟ ತಾಯಿ ನಿನ್ನ ರಕ್ಷೆಗೆಂದು ಬರುವರೇ..?
ಜತೆಯಲಿದ್ದ ಗೆಳೆಯರಾರು ಕೇಳದು ನಿನ್ನಾ ಕರೆ..
ಜನರ ಮಾತು ನಂಬಿ ನಿನಗೆ ಇಂದು ಯಾರು ಆಸರೆ..?
ಜನ್ನತಲ್ಲಿ ಸೇರಲಿರುವೆ ರಬ್ಬಿನಾಜ್ಞೆ ಬಂದರೆ..

ಜಗದೊಡೆಯನೇ ಎಂದಿಗೂ ದೊರೆ..(ಮಾನವ)

ಜನನವಾದವನು ಒಮ್ಮೆ ಮರಣ ಹೊಂದದಿರುವನೇ..!
ಜನ್ನತಾಗಿರಲಿ ನಮ್ಮ ಶಾಶ್ವತವಾದ ಮನೆ..(2)

ಜಗದೊಡೆಯನ ಮುಂದೆ ನಿಂತು ಮಾಡುವೆ ನಾ ಪ್ರಾರ್ಥನೆ..
ಜಯವ ಪಡೆದು ಸ್ವರ್ಗದೆಡೆಗೆ ತಲುಪಬೇಕು ಬೇಗನೆ..(2)

ನರಕದಗ್ನಿ ಜ್ವಾಲೆಯನ್ನು ನೆನೆಯಲೆನಗೆ ಆಗದು..
ನರಳಿ ನಬಿಯ ಕಡೆಗೆ ಬರದೆ ತಾಪವಂತೂ ನೀಗದು..
ನಾಳೆ ನಬಿಯು ನೆರಳಿಗಾಗಿ ಅರ್ಶಿನಲ್ಲಿ ಸಾಜಿದು..
ನಾಥನಲ್ಲದಾರೂ ನಮಗೆ ಕರುಣೆಯನ್ನು ತೋರದು..

ನಷ್ಕುರುರ್ರಹೀಮ ನಹ್ಮದು..(ಮಾನವ)



Post a Comment

0 Comments