Nabiyare Pream Daaha (ನೆಬಿಯರೆ ಪ್ರೇಮ ದಾಹ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ನೆಬಿಯರೆ  ಪ್ರೇಮ ದಾಹ ಮನದಿ ತುಂಬಿದೆ
ನಿಮ್ಮನು ಕಾಣುವಾಸೆ ನನ್ನ ಕಾಡಿದೆ 
ಕಾಣದೆ ಕಣ್ಣ ಹನಿಯು ತುಂಬಿ ಸುರಿದಿದೆ
ನಿತ್ಯವೂ ಪ್ರೇಮ ಮನದಿ ಕೂಡಿ ಬಂದಿದೆ..

(ನೆಬಿಯರೆ  ಪ್ರೇಮ ದಾಹ )

ಪ್ರೇಮಿ ಮನವು ದಿನದಿನವೂ ನಿಮ್ಮ ಕನಸು ಕಂಡಿದೆ
ನಿತ್ಯವೂ ನಿಮ್ಮ ಕಾಣಲೆಂದೆ  ಹೃದಯ ಬೇಡಿದೆ  ।।೨।।
ರಾತ್ರಿ ಹಗಲು ಕಣ್ಣ  ಹನಿಯ ಸುರಿಸಿ ನಾನು ಬೇಡುವೆ
ಕನಸಿನಲ್ಲು ನಿಮ್ಮ ಮುಖವೇ ಕಾಣಲೆಂದೇ  ಕಾಯುವೆ ।।೨।।

ನನ್ನ ಮುತ್ತು ಜೀವ ಸೊತ್ತು ರಕ್ತದಲ್ಲಿ ಬರೆವೆನು
ಕರಳ ಕಿತ್ತು ನನ್ನ ಮುತ್ತು ನೆಬಿಯರೀಗೆ ಕೊಡುವೆನು
ಪ್ರೇಮಿ ನಾನು ಬೇಡುವೆನು ನೆಬಿಯೇ ನಿಮ್ಮ ಕಾಣೆನು
ಹಗಲು ರಾತ್ರಿ  ಬಿಡುವು ಇಲ್ಲದೇನೆ ನಾನು ಕಾದೆನು

ನನ್ನ ಗುರಿಯು ಮುತ್ತು ನೆಬಿಯರೂ.... 

(ನೆಬಿಯರೆ  ಪ್ರೇಮ ದಾಹ )

ಲೋಕವೇ  ಹೊಗಳಿದಂತ ರಾಜ ನನ್ನ ನೆಬಿಯರು
ಹೇಳಲೇ ಆ ಚರಿತ್ರೆ  ಮುಗುಯುದುಂಟೆ  ಬರೆದರೂ ।।೨।।
ಎಲ್ಲಿದೆ ಪ್ರೀತಿ ಇಲ್ಲಿ ಹೋಲಿಕೇಯು ಜಗದಲಿ
ವಿಶ್ವವೇ ಬೆಚ್ಚಿ ಬಿದ್ದು ನ್ಯಾಯ ನೀತಿ ನಡೆಯಲಿ ।।೨।।

ಸತ್ಯ ವೊಂದೆ  ನಿತ್ಯ ವೆಂದು ಸಾರಿ ಸಾರಿ ನುಡಿದರು 
ಸುಳ್ಳಿ ನೆದುರು ಗೋಡೆ ಕಟ್ಟಿದಂತ ರಾಜ ನೆಬಿಯರು
ಗಾಂಭಿರ್ಯತೆಯ ಜೀವನದಲಿ  ಮನೆಯ ಮಾತಾದರು
ದ್ರೋಹ ಬಗೆದ ಮನಸ್ಸುಗಳನು  ಪ್ರೀತಿಯಲ್ಲಿ ಕಂಡರೂ
ಶತ್ರು ಮನಕು  ಮಿತ್ರರಾದರು..

(ನೆಬಿಯರೆ  ಪ್ರೇಮ ದಾಹ )

ನಿಮ್ಮ ಕಂಡ ಕಂಗಳೆಲ್ಲ ಪುಣ್ಯ ಸರದಿ ಸೇರಿದೆ
ಕಾಣದಂತ ನನ್ನ  ನಯನ ಹನಿಯ ಸುರಿಸಿ ಬೇಡಿದೆ ।।೨।।
ಸಾಲದೇನು ನಿಮ್ಮ ಕಾಣಲೆನ್ನ ಎರಡು ಕಂಗಳು
ಜೀವ ವನ್ನೇ ಅರ್ಪಿಸುವೆ ನಿಮ್ಮ ಮುಖವ ಕಾಣಲು  ।।೨।।

ಪದಬರೆಯೋ ಬೆರಳುಗಳು ನಾಚಿ ತಲೆಯು ಬಾಗಿದೆ
ನಿಮ್ಮ ಮಹಿಮೆ ಬರೆದು ಮುಗಿಸು ಕೈಗಳೆಲ್ಲೂ ಹುಟ್ಟಿದೆ
ಲೋಕವನ್ನು ಕೆತ್ತಿದರು  ನಿಮ್ಮ ಕೀರ್ತಿ ಮುಗಿಯುದೆ 
ಜಗದ ವಿಸ್ಮಯವೂ  ನಿಮ್ಮ ಜೀವನದಿ  ಅಡಗಿದೆ
ಲೋಕ ದೊರೆಯು ನೀವೇ ನೆಬಿಯರೆ... .

(ನೆಬಿಯರೆ  ಪ್ರೇಮ ದಾಹ )


Post a Comment

0 Comments