Jeevana Mojinali (ಜೀವನ ಮೋಜಿನಲಿ)



ಅಮ್ಮಾ....ಅಮ್ಮಾ....
ಅಮ್ಮಾ...ಅಮ್ಮಾ...

ಜೀವನ ಮೋಜಿನಲಿ... ಮೆರೆದೆ ತಲೆಬಾಗಿ.
ಕ್ಷಮಿಸು ಅಮ್ಮ ನೀ...ಬೇಡುವೆ ಶರಣಾಗಿ...2

ತಾಯಿಯ ನೋಯಿಸುತಾ....ಅಳುತಿರೋ ಪರದೇಸಿ..
ಕಾಲಿಗೆ ಬೀಳುವೆ ನಾ..ಕ್ಷಮೆಯನು ಯಾಚಿಸಿ...
                           (ಜೀವನ)

ಆ ಗರ್ಭದ ಉದರದಿ ನನ್ನನ್ನು ಕಾಯುತ ಕುಳಿತೆ ನೀ...
ಅಹಂಭಾವನೆ ಕೂಡಿರುವ ನಾನು ಮರೆತೆ ಆ ಪ್ರೀತಿ..

ನೋವಿನ ಸಾಲು ದಿನ ಎಣಿಸುತ್ತ ಮಮತೆಯ ತೋರುವೆ ನೀ...
ನೋಯಿಸಲೆಂದೆ ಹುಟ್ಟಿದೆ ನಾನು ನಾನೆಂತಹ ಪಾಪಿ..

"ಪುಣ್ಯವು ತುಂಬಿದ ಕಾಲಿಗೆ ಬಿದ್ದು ಕ್ಷಮೆಯ ಕೇಳುವೆ ನಾ..
ಶಿರವಾ ಸವರಿ ನನ್ನನ್ನು ನೀ ಕ್ಷಮಿಸುವೆಯಾ ಅಮ್ಮ."2
                   
ಓ ಅಮ್ಮಾ.........(ಜೀವನ)

ಈ ಭೂಮಿಯಲಿ ಒಮ್ಮೆ ನಾನು ಶವವಾಗಿ ಮುಗಿವೇ..
ಯಾರ್ಯಾರು ಆಸರೆಯು ಇಲ್ಲದ ಯಾತ್ರೆ ಹೋಗುವೆ..

ಆ ದಿನ ತಾಯೆ ನನ್ನನು ನೀನು ದೂರ ಸರಿಸದಿರು.
ನಾ ನೀಡಿದ ಆ ನೋವುನು ನೀನು ಅಂದು ಕ್ಷಮಿಸಿ ಬಿಡು...

"ಪರಲೋಕದ ಮೋಕ್ಷಕ್ಕಾಗಿ ನೀ ಬೇಡುವೆಯಾ ಅಮ್ಮ..
ಇಹಲೋಕದಿ ನಾ ನೀಡಿದ ನೋವನು ಮರೆಯುವೆ ಯಾ ಅಮ್ಮಾ"2
 
ಓ ಅಮ್ಮಾ.........(ಜೀವನ)


Post a Comment

0 Comments